ಪ್ರಾಂಶುಪಾಲರು ಮತ್ತು ದೈಹಿಕ ಶಿಕ್ಷಣ ಉಪನ್ಯಾಸಕರ ಗಮನಕ್ಕೆ,

November23, 2021
by Admin

ದಿನಾಂಕ 26ನೇ ನವೆಂಬರ್, 2021 ಶುಕ್ರವಾರ ದಂದು ಬಿ.ಎಂ.ಎಸ್ ಬಾಲಕಿಯರ ಪದವಿ ಪೂರ್ವ ಕಾಲೇಜು, ಬಸವನಗುಡಿ ಇಲ್ಲಿ ನಿಗದಿಯಾಗಿದ್ದಂತಹ ವಾಲಿಬಾಲ್ (ಬಾಲಕಿಯರಿಗಾಗಿ) ಪಂದ್ಯಾವಳಿಯನ್ನು ಮಳೆಯ ಕಾರಣದಿಂದಾಗಿ ದಿನಾಂಕ 29ನೇ ನವೆಂಬರ್2021 ರ ಸೋಮವಾರಕ್ಕೆ ಮುಂದೂಡಲಾಗಿದೆ. ಭಾಗವಹಿಸುವ ಕ್ರೀಡಾಪಟುಗಳು ನಿಗದಿತ ದಿನಾಂಕಗದಂದು ಸೂಚಿಸಿದ ಸ್ಥಳದಲ್ಲಿ ಬೆಳಿಗ್ಗೆ 8:30ರ ಒಳಗಾಗಿ ನೋಂದಾಯಿಸಿಕೊಳ್ಳಲು ಸೂಚಿಸಿದೆ.             ******                                      ದಿನಾಂಕ 10ನೇ ಡಿಸೆಂಬರ್, 2021 ರಂದು ಸಂತ ಆಂಥೋನಿ ಪದವಿ ಪೂರ್ವ ಕಾಲೇಜು, ಕೆಂಗೇರಿ ಇಲ್ಲಿ ನಿಗದಿಯಾಗಿದ್ದಂತಹ Throwball ಪಂದ್ಯಾವಳಿಯನ್ನು ದಿನಾಂಕ 3ನೇ ಡಿಸೆಂಬರ್2021ರಂದು ನಿಗದಿಪಡಿಸಲಾಗಿದೆ. ಭಾಗವಹಿಸುವ ಕ್ರೀಡಾಪಟುಗಳು ನಿಗದಿತ ದಿನಾಂಕದಂದು ಸೂಚಿಸಿದ ಸ್ಥಳದಲ್ಲಿ ಬೆಳಿಗ್ಗೆ 8:30ರ ಒಳಗಾಗಿ ನೋಂದಾಯಿಸಿಕೊಳ್ಳಲು ಸೂಚಿಸಿದೆ.            ********                                   ದಿನಾಂಕ 13 & 14ನೇ ಡಿಸೆಂಬರ್, 2021 ರಂದು ಶೇಷಾದ್ರಿಪುರಂ ಸ್ವತಂತ್ರ ಪದವಿ ಪೂರ್ವ ಕಾಲೇಜು, ಕೆಂಗೇರಿ ಉಪನಗರ ಇಲ್ಲಿ ನಿಗದಿಯಾಗಿದ್ದಂತಹ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ದಿನಾಂಕ 10 &11ನೇ ಜನವರಿ 2022 ಕ್ಕೆ ಮುಂದೂಡಲಾಗಿರುತ್ತದೆ. ಭಾಗವಹಿಸುವ ಕ್ರೀಡಾಪಟುಗಳು ನಿಗದಿತ ದಿನಾಂಕದಂದು ಸೂಚಿಸಿದ ಸ್ಥಳದಲ್ಲಿ ಬೆಳಿಗ್ಗೆ 8:30ರ ಒಳಗಾಗಿ ನೋಂದಾಯಿಸಿಕೊಳ್ಳಲು ಸೂಚಿಸಿದೆ.                                            ಉಪನಿರ್ದೇಶಕರು                           ಪದವಿ ಪೂರ್ವ ಶಿಕ್ಷಣ ಇಲಾಖೆ
ಬೆಂಗಳೂರು ದಕ್ಷಿಣ ಜಿಲ್ಲೆ

Circulars