ಆತ್ಮೀಯ ಜಿಲ್ಲಾ ಪ್ರಾಂಶುಪಾಲರ ಗಮನಕ್ಕೆ,

November28, 2021
by Admin

COVID URGENT)
ಮಾನ್ಯ ನಿರ್ದೇಶಕರ ಆದೇಶದ ಅನ್ವಯ,ಜಿಲ್ಲಾ ವ್ಯಾಪ್ತಿಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಂದ ದಿನವಹಿ ಕೋವಿಡ್ POSITIVE ಸಂಖ್ಯೆಗಳನ್ನು ಪಡೆದು ಸರ್ಕಾರಕ್ಕೆ/ಇಲಾಖೆಗೆ ಪ್ರತಿದಿನ ಮಾಹಿತಿ ನೀಡಬೇಕಾಗಿರುತ್ತದೆ .ಆದುದರಿಂದ
ತಾವು ಈ ಕೆಳಗಿನಂತೆ ಮಾಹಿತಿ ಒದಗಿಸುವುದು.
1. ದಿನವಹಿ ತಮ್ಮ ಕಾಲೇಜುನಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರು ಕೋವಿಡ್ POSITIVE ಪ್ರಕರಣ ದಾಖಲಾಗಿದ್ದರೆ ಅಂಥಹವರ ಸಂಖ್ಯೆಯನ್ನು ತಿಳಿಸುವುದು.
2. ಸದರಿ ಮಾಹಿತಿಯನ್ನು ಪ್ರತಿ ದಿನದ ಮೊದಲಾರ್ಧದ ಅವಧಿ(1 ಗಂಟೆ ಒಳಗಾಗಿ)ಯಲ್ಲಿ ಕಡ್ಡಾಯವಾಗಿ ಈ ಗುಂಪಿನಲ್ಲೇ ನೀಡುವುದು.
3. ಯಾವುದೇ ಕಾರಣಕ್ಕೂ ತಪ್ಪು ಮಾಹಿತಿಯನ್ನು ನೀಡದೆ ಸರಿಯಾದ ಮಾಹಿತಿಯನ್ನೇ ನೀಡಬೇಕೆಂದು ತಿಳಿಸಿದೆ.
4. ಒಂದು ವೇಳೆ ಶೂನ್ಯ ವರದಿ ಇದ್ದಲ್ಲಿ ಇದೇ ಗುಂಪಿನಲ್ಲಿ ಶೂನ್ಯವರದಿ ಎಂದು ಸಂದೇಶ ಕಳುಹಿಸುವುದು.
ಹೀಗಾಗಿ, ಸೂಚಿತ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿ ದಿನ ಮಾಹಿತಿಯನ್ನು ಗುಂಪಿನಲ್ಲಿ ಹಂಚಿಕೊಳ್ಳುವಂತೆ ಎಲ್ಲಾ ಪ್ರಾಂಶುಪಾಲರಿಗೂ ಈ ಮೂಲಕ ಸೂಚಿಸಿದೆ.
ಉಪನಿರ್ದೇಶಕರು
ಬೆಂಗಳೂರು ದಕ್ಷಿಣ

Circulars