ಆತ್ಮೀಯ ಪ್ರಾಂಶುಪಾಲರುಗಳಿಗೆ ಈ ಮೂಲಕ ತಿಳಿಸುವುದೆನೆಂದರೆ,

July6, 2021
by Admin

2020-21ನೇ ಶೈಕ್ಷಣಿಕ ಸಾಲಿನಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ / ಕಾಲೇಜುಗಳಿಂದ ಕಾಲೇಜು ಬದಲಾವಣೆ ಜೊತೆಗೆ ಭಾಷೆ/ವಿಷಯ ಬದಲಾವಣೆ ಮಾಡಿಕೊಂಡು ತಮ್ಮ ಕಾಲೇಜುಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳು ಈ ಹಿಂದೆ ಬೇರೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪ್ರಥಮ ಪಿಯುಸಿಯಲ್ಲಿ ಪಡೆದಿರುವ ಅಂಕಗಳನ್ನು ಹೊರತುಪಡಿಸಿ  ಮಾನ್ಯ ನಿರ್ದೇಶಕ ಕಛೇರಿಯ  ಆದೇಶದಂತೆ, 35+5 = 40 ಅಂಕಗಳನ್ನು ನಮೂದಿಸಲು ತಿಳಿಸಲಾಗಿತ್ತು.

ಆದರೆ ಮಾನ್ಯ ನಿರ್ದೇಶಕರ ಕಛೇರಿಯ ಸಂದೇಶದಂತೆ,  ಭಾಷೆ/ವಿಷಯ ಬದಲಾವಣೆ ಮಾಡಿಕೊಂಡಂತಹ ವಿದ್ಯಾರ್ಥಿಗಳ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡಿ ಭಾಷೆ / ವಿಷಯ ಬದಲಾವಣೆಯೊಂದಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಪ್ರಥಮ ಪಿಯುಸಿ ಅಂಕಪಟ್ಟಿ ಮತ್ತು ಕರಡು ಪ್ರವೇಶ ಪತ್ರವನ್ನು ಉಪ ನಿರ್ದೇಶಕರ ಕಛೇರಿ, ಬಸವನಗುಡಿ, ಬೆಂಗಳೂರು ದಕ್ಷಿಣ ಜಿಲ್ಲೆ ಇಲ್ಲಿ ನಾಳೆ ಬೆಳಿಗ್ಗೆ 10-30 ಗಂಟೆಯೊಳಗಿ  ಖುದ್ದಾಗಿ ಸಲ್ಲಿಸತಕ್ಕದ್ದು ಎಂದು ಈ ಮೂಲಕ ಸೂಚಿಸಿದೆ.

 

ಉಪ ನಿರ್ದೇಶಕರು ಆದೇಶದ ಮೇರೆಗೆ

 

Important Notice