ಆತ್ಮೀಯ ಪ್ರಾಂಶುಪಾಲರುಗಳ ಗಮನಕ್ಕೆ
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ 2020 ರಲ್ಲಿ ಅನುತ್ತೀರ್ಣ ಗೊಂಡ ವಿದ್ಯಾರ್ಥಿಗಳ ಅನುತ್ತೀರ್ಣ ಅಂಕಪಟ್ಟಿ ಮತ್ತು ಅರ್ಜಿಗಳನ್ನು (MCA) ಆಯಾ ಕಾಲೇಜುಗಳ ಪ್ರಾಚಾರ್ಯರ ಲಾಗ್ ಇನ್ ನಲ್ಲಿ ಕಳುಹಿಸಲಾಗಿದೆ. ಸದರಿ ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಂಡು ಸುತ್ತೋಲೆ ಪ್ರಕಾರ ಕ್ರಮ ಜರುಗಿಸಲು ಜಿಲ್ಲಾ ವ್ಯಾಪ್ತಿಯ ಪ್ರಾಚಾರ್ಯರುಗಳಿಗೆ ತಿಳಿಸಲಾಗಿದೆ. ಅಲ್ಲದೇ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಅನುತ್ತೀರ್ಣಗೊಂಡ ವಿಷಯಕ್ಕೆ ಪರೀಕ್ಷೆ ಬರೆಯಲು ಭರಿಸಿದ ಶುಲ್ಕ ನಮೂದಿಸಿ, ದಾಖಲಿಸಲು ಪ್ರಾಚಾರ್ಯರಿಗೆ ಅವರವರ ಲಾಗಿನ್ ನಲ್ಲಿ (ಆನ್ ಲೈನ್ ಪೋರ್ಟಲ್) ನಲ್ಲಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ.
ಮುಂದುವರೆದು, 2021 ರ ವಾರ್ಷಿಕ ಪರೀಕ್ಷೆ ಬರೆಯಲು ಇಚ್ಚಿಸುವ ಖಾಸಗಿ ಅಭ್ಯರ್ಥಿಗಳ (Private Candidates) ವಿವರ ದಾಖಲಿಸಲೂ (ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಮಾತ್ರ / Only for Govt. Colleges) ಕೂಡ ಆನ್ ಲೈನ್ ಪೋರ್ಟಲ್ ನಲ್ಲಿ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ. ಈ ಬಗ್ಗೆ ಪರೀಕ್ಷಾ ಶಾಖೆಯಿಂದ ಹೊರಡಿಸಿದ ಸುತ್ತೋಲೆಗಳ ಪ್ರಕಾರ ಕ್ರಮ ಜರುಗಿಸಲು ತಮ್ಮ ಜಿಲ್ಲಾ ವ್ಯಾಪ್ತಿಯ ಕಾಲೇಜುಗಳ ಪ್ರಾಚಾರ್ಯರುಗಳಿಗೆ ತಿಳಿಸಲಾಗಿದೆ.
ಉಪ ನಿರ್ದೇಶಕರ ಆದೇಶದ ಮೇರೆಗೆ,