ದ್ವಿತೀಯ ಪಿ. ಯು.ಸಿ. 2020ರ ಪೂರಕ ಪರೀಕ್ಷೆಯ ಮೌಲ್ಯಮಾಪನ ಕಾರ್ಯಕ್ಕೆ ಆದೇಶಗಳನ್ನು ಈಗಾಗಲೇ ಕೇಂದ್ರ ಕಛೇರಿಯಿಂದ ಕಳುಹಿಸಲಾಗಿದ್ದು, ಮೌಲ್ಯಮಾಪನ ಆದೇಶ ತಲುಪಿರುವ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರುಗಳು ಸದರಿ ಕಾಲೇಜುಗಳ ಮೌಲ್ಯಮಾಪಕರುಗಳನ್ನು ಮೌಲ್ಯಮಾಪನ ಕಾರ್ಯಕ್ಕೆ ಕಳುಹಿಸುವಂತೆ ತಿಳಿಸಿದೆ. Covid-19 ಕಾರ್ಯಕ್ಕೆ ನಿಯೋಜಿಸಲ್ಪಟ್ಟವರು ಮೌಲ್ಯಮಾಪನ ಆದೇಶದ ಪ್ರತಿಗಳನ್ನು ತೊರಿಸಿ ಬಿಡುಗಡೆಗೊಂಡು ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗಲು ತಿಳಿಸಿದೆ.
ಮಾನ್ಯ ನಿರ್ದೇಶಕರ ಆದೇಶದ ಮೇರೆಗೆ,