ತುರ್ತು/Urgent: ಮೌಲ್ಯಮಾಪಕರ ನೋಂದಣಿ/Evaluators Registration

January7, 2020
by Admin

ದ್ವಿತೀಯ ಪಿಯುಸಿ ಪರೀಕ್ಷಾ ಮೌಲ್ಯ ಮಾಪಕರ ಆನ್ಲೈನ್ ನೋಂದಣಿ ಈ ಮೇಲಿನಂತೆ ಇದ್ದು, ಇನ್ನು ಅನೇಕ ಕಾಲೇಜಿನಲ್ಲಿ ಎಲ್ಲಾ ವಿಷಯಗಳ ಉಪನ್ಯಾಸಕರನ್ನು ನೋಂದಾಯಿಸದೇ ಇರುವುದು ಮಾನ್ಯ ನಿರ್ದೇಶಕರ ಗಮನಕ್ಕೆ ಬಂದಿದೆ. ಇದನ್ನು ಮಾನ್ಯರು ತುಂಬಾ ಗಂಭೀರವಾಗಿ ಪರಿಗಣಿಸಿದ್ದಾರೆ.

(ನಿಮ್ಮ ಕಾಲೇಜಿನಲ್ಲಿ ಮಂಜೂರಾಗಿರುವ ವಿಷಯಗಳ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ನೇಮಕಗೊಂಡ ಎಲ್ಲಾ ಉಪನ್ಯಾಸಕರನ್ನು PU Online Portal ನಲ್ಲಿ ನೋಂದಾಯಿಸಬೇಕಾದ ಮಾಹಿತಿ ಇಲಾಖೆಲ್ಲಿ ಲಭ್ಯವಿದೆ)

ವಿಶೇಷವಾಗಿ ಅನುದಾನಿತ ಮತ್ತು ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿನ ಉಪನ್ಯಾಸಕರ ಮಾಹಿತಿಯನ್ನು ನೋಂದಾಯಿಸದೇ ಇರುವಂತಹ ಅನುದಾನಿತ ಕಾಲೇಜಿನ ವೇತನಾನುದಾನವನ್ನು ತಡೆಹಿಡಿಯಲು ಮತ್ತು ಅನುದಾನ ರಹಿತ ಕಾಲೇಜಿನ ಮಾನ್ಯತೆಯನ್ನು ತಡೆಹಿಡಿಯಲು ಶಿಫಾರಸ್ಸು ಮಾಡುವಂತೆ ನಿನ್ನೆ ದಿನಾಂಕ: 06.01.2020 ರಂದು ನಡೆದ ಸಭೆಯಲ್ಲಿ ಮಾನ್ಯರು ತಿಳಿಸಿದ್ದಾರೆ. ಅಲ್ಲದೇ ಇದೇ ಸಾಲಿನ ಪ್ರಥಮ ಪಿಯುಸಿ ಫಲಿತಾಂಶವನ್ನು ಅನುಮೋದೀಸದೇ ತಡೆಹಿಡಿಯಲು ಸೂಚಿಸಿದ್ದಾರೆ.

ಇದಕ್ಕೆ ಅವಕಾಶ ನೀಡದೇ, ಇಂದೇ ತುರ್ತಾಗಿ ನೋಂದಾಯಿಸದೇ ಇರುವ ಎಲ್ಲಾ ಉಪನ್ಯಾಸಕರನ್ನು ಆನ್ಲೈನ್ ನಲ್ಲಿ ನೋಂದಾಯಿಸಿ ಅದರ ಪ್ರತಿಯನ್ನು ಈ ಕಾರ್ಯಾಲಯಕ್ಕೆ ಸಲ್ಲಿಸುವಂತೆ ಈ ಮೂಲಕ ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದೆ.

ಉಪನಿರ್ದೇಶಕರು
ಪದವಿ ಪೂರ್ವ ಶಿಕ್ಷಣ ಇಲಾಖೆ,
ಬೆಂಗಳೂರು ದಕ್ಷಿಣ

Urgent Notice