Invitation to all Principals

September25, 2019
by Admin

ಆತ್ಮೀಯ ಪ್ರಾಂಶುಪಾಲರೇ ನಮಸ್ಕಾರ,
ದಿನಾಂಕ 27.9.2019 ರಂದು ಬಿ.ಇ.ಎಸ್ ಪದವಿಪೂರ್ವ ಕಾಲೇಜು, ಜಯನಗರ, ಬೆಂಗಳೂರು (B E S PU College, 4th Block, Jayanagara, Bengaluru), ಇಲ್ಲಿ ಬೆಳಿಗ್ಗೆ 8.30ಕ್ಕೆ, 2018-19 ನೇ ಶ್ಯಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ನಮ್ಮ ಜಿಲ್ಲೆಯ ದ್ವಿತೀಯ PUC ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸೇವೆಯಿಂದ ನಿವೃತ್ತರಾದ ಪ್ರಾಂಶುಪಾಲರಿಗೆ ಸನ್ಮಾನ ಹಾಗೂ ಲ್ಯಾಪ್ಟಾಪ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಸುರೇಶ್ ಕುಮಾರ್, ಹಾಗೂ ಅತಿಥಿಗಳಾಗಿ PU ನಿರ್ದೇಶಕರಾದ ಶ್ರೀಮತಿ ಕನಗವಲ್ಲಿ IAS, ವಿಧಾನ ಪರಿಷತ್ ಸದಸ್ಯರಾದ ಶ್ರೀ ಪುಟ್ಟಣ್ಣ, ಆ. ದೇವೇಗೌಡರು ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪನಿರ್ದೇಶಕರಾದ ಶ್ರೀಮತಿ ಚಂದ್ರಕಲಾರವರು ವಹಿಸಿಸುತ್ತಿದ್ದಾರೆ. ಆದ್ದರಿಂದ ಎಲ್ಲಾ ಪ್ರಾಂಶುಪಾಲರು ತಪ್ಪದೆ ಹಾಜರಾಗಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕಾರ ನೀಡುವುದು.
ಕರಬಸಪ್ಪ, ಜಿ. ಕೆ. ಶ್ರೀರಾಮ
ಅಧ್ಯಕ್ಷರು, ಕಾರ್ಯದರ್ಶಿ
ಬೆಂಗಳೂರು ದಕ್ಷಿಣ ಜಿಲ್ಲೆ, ಬೆಂಗಳೂರು.

News